
ಕೃಪೆ : ಮಲ್ಲಿಕಾರ್ಜುನ ತುಂಗಳ :
ರಬಕವಿ-ಬನಹಟ್ಟಿ : ತಾಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದು ೧೨ ವರ್ಷಗಳಾದರೂ , ಹೊಸ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಮೂಲಸೌರ್ಯಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ರೂಪುಗೊಂಡಿಲ್ಲ. ಆಡಳಿತಾತ್ಮಕ, ಸಾರಿಗೆ, ಆರೋಗ್ಯ, ಕೈಗಾರಿಕೆ ಹಾಗೂ ಉದ್ಯೋಗ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಜನಜೀವನದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ತಾಲೂಕು ಕೇಂದ್ರಕ್ಕೆ ಅಗತ್ಯವಾದ ಪ್ರಜಾಸೌಧ ನಿರ್ಮಾಣಕ್ಕಾಗಿ ಕಳೆದ ಐದು ವರ್ಷಗಳಿಂದ ಜಾಗೆ ಅಂತಿಮಗೊಳ್ಳದೆ ವಿಳಂಬವಾಗುತ್ತಿದೆ. ರಬಕವಿ, ಬನಹಟ್ಟಿ ಹಾಗೂ ಮದನಮಟ್ಟಿ ಸೇರಿ ನಾಲ್ಕು ಸ್ಥಳಗಳು ಚರ್ಚೆಗೆ ಬಂದರೂ ಅಧಿಕೃತ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.
ಇಂದಿರಾ ಕ್ಯಾಂಟೀನ್ ಉದ್ಘಾಟನೆ ಇನ್ನೂ ಇಲ್ಲ:
ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆ ಆವರಣದಲ್ಲಿ ಬಡವರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ನಿರ್ಮಿಸಿ ವರ್ಷ ಕಳೆದಿದ್ದರೂ ಇನ್ನೂ ಸಾರ್ವಜನಿಕರ ಸೇವೆಗೆ ತೆರೆದಿಲ್ಲ.
ನೇಕಾರಿಕೆ ಪ್ರಧಾನ ಕೇಂದ್ರವಾಗಿರುವ ತಾಲೂಕಿನಲ್ಲಿ ಜವಳಿ ಉದ್ಯಮ ತೀವ್ರ ಸಂಕಷ್ಟ ಎದುರಿಸುತ್ತಿದೆ. ಕೋನ್ ಡೈಯಿಂಗ್ ಘಟಕ, ಟೆಕ್ಸ್ ಟೈಲ್ ಅಥವಾ ಜವಳಿ ಪಾರ್ಕ್ರ ಸ್ಥಾಪನೆ, ಸರ್ಕಾರದ ವಿಶೇಷ ಪ್ಯಾಕೇಜ್ ಹಾಗೂ ಮಾರುಕಟ್ಟೆ ಸೌಲಭ್ಯ ಒದಗಿಸುವ ಮೂಲಕ ಸಾವಿರಾರು ಕುಟುಂಬಗಳಿಗೆ ಬದುಕಿನ ಭದ್ರತೆ ಕಲ್ಪಿಸುವ ಅಗತ್ಯವಿದೆ.
ಉಪ ನೊಂದಣಿ ಕಚೇರಿ ಸ್ಥಾಪನೆಗೆ ವಿಳಂಬ :
೨೦೨೩ ರಲ್ಲೇ ಉಪ ನೋಂದಣಿ ಕಚೇರಿ ಆರಂಭಿಸುವ ಭರವಸೆ ನೀಡಲಾಗಿದ್ದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ದಾಖಲೆಗಳ ನೋಂದಣಿಗಾಗಿ ಸಾರ್ವಜನಿಕರು ಬೇರೆ ತಾಲೂಕುಗಳಿಗೆ ತೆರಳಿ ಸಮಯ ಹಾಗೂ ಹಣ ವ್ಯಯಿಸಬೇಕಾಗಿದೆ.
*ತಾಲೂಕಿನ ಅನೇಕ ಗ್ರಾಮಗಳಿಗೆ ನೇರ ಬಸ್ ಸಂಪರ್ಕವಿಲ್ಲ . ಗ್ರಾಮೀಣ ರಸ್ತೆಗಳ ದುರವಸ್ಥೆಯಿಂದ ಜನರು ಸಂಚಾರದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತ್ಯೇಕ ಸಾರಿಗೆ ಘಟಕ ಸ್ಥಾಪನೆ, ಕೊರತೆ, ಕೆಐಎಡಿಬಿ ಕೈಗಾರಿಕಾ ವಲಯದ ಅಭಾವ, ಯುವಕರಿಗೆ ಉದ್ಯೋಗಾವಕಾಶಗಳ ಕೊರತೆ ಹಾಗೂ ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಅಗತ್ಯ ಮೂಲ ಸೌಕರ್ಯಗಳ ಅಭಾವವೂ ಅಭಿವೃದ್ಧಿಗೆ ಅಡ್ಡಿಯಾಗಿವೆ.
ಶಾಸಕ ಸಿದ್ದು ಸವದಿ ಹೇಳಿಕೆ:
ರಬಕವಿ-ಬನಹಟ್ಟಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಜನರ ಅಗತ್ಯಗಳಿಗೆ ಆದ್ಯತೆ ನೀಡಿ ಹಂತ ಹಂತವಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು
ಶಾಸಕ ಸಿದ್ದು ಸವದಿ ಅವರ ಹೇಳಿಕೆ : ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಸರ್ಕಾರದ ಎಲ್ಲಾ ಭಾಗದ ಶಾಸಕರು ಹೋರಾಟ ನಡೆಸಿದ್ದೇವೆ. ಬರುವ ಅಧಿವೇಶನದಲ್ಲಿ ಮತ್ತೆ ಹೋರಾಟ ನಿರಂತರ. ಆದರೂ ಕಾಯಕಲ್ಪವಾಗದಿರುವದು ಬೇಸರ ತಂದಿದೆ. ತಾಲೂಕಾ ಘೋಷಣೆಯಾದರೆ ಮಾತ್ರ ಅಭಿವೃದ್ಧಿ ಯಾಗುವುದಿಲ್ಲ. ಜನರಿಗೆ ಅಗತ್ಯ ಕಚೇರಿಗಳು, ರಸ್ತೆ, ಸಾರಿಗೆ, ಉದ್ಯೋಗ ಮತ್ತು ಕೈಗಾರಿಕೆಗಳು ಶೀಘ್ರವಾಗಿ ಬರಬೇಕು. ಇಲ್ಲವಾದರೆ ಹೊಸತಾಲೂಕಿನ ಉದ್ದೇಶವೇ ಅಪೂರ್ಣವಾಗುತ್ತದೆ ಎಂದು ಜನತೆ ಹೇಳುತ್ತಾರೆ.

