
ಆಸಂಗಿ, ಜು. ೧೧: ಬನಹಟ್ಟಿ ವಲಯದ ಆಸಂಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಜಮಖಂಡಿ ತಾಲೂಕು, ಜ್ಞಾನ ವಿಕಾಸ ಕಾರ್ಯಕ್ರಮದಡಿ ಪೌಷ್ಟಿಕ ಆಹಾರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಬಾಗಲಕೋಟೆ ಜಿಲ್ಲಾ ನಿರ್ದೇಶಕರಾದ ಶ್ರೀ ಚನ್ನಕೇಶವ ಉದ್ಘಾಟಿಸಿ ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮವು ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಯೋಜನೆಯಾಗಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಆರೋಗ್ಯ, ಕುಟುಂಬ ನಿರ್ವಹಣೆ , ಮಹಿಳಾ ಕಾನೂನುಗಳು, ಸರ್ಕಾರ ಹಾಗೂ ಬ್ಯಾಂಕುಗಳ ವಿವಿಧ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಮಹಿಳೆಯರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯ ಇಲಾಖೆಯ ಶ್ರೀ ಎಂ.ಕೆ. ಮುಲ್ಲಾ ಮಾತನಾಡಿ, ಕುಟುಂಬದ ಆರೋಗ್ಯವು ಅಡುಗೆ ಮನೆಯಿಂದಲೇ ಆರಂಭವಾಗುತ್ತದೆ. ಇಂದಿನ ದಿನಗಳಲ್ಲಿ ಜಂಕ್ ಫುಡ್ ಸೇವನೆಯನ್ನು ತೊರೆದು , ಮನೆಯಲ್ಲೇ ಪೌಷ್ಟಿಕ ಆಹಾರ ತಯಾರಿಸಿ ಸೇವಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸಂಗಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸುಜಾತಾ ಗಾಯಕವಾಡ ವಹಿಸಿದ್ದರು. ಈ ಸಂದರ್ಭದಲ್ಲಿ , ಶ್ರೀ ವರ್ಧನ್ರ್ ಪಟವರ್ಧನ್ , ಶ್ರೀ ದೊಂಡಿಭಾ ಗಾಯಕವಾಡ, ಶ್ರೀ ಯಮನಪ್ಪ ಪದ್ದಿ, ಶ್ರೀ ರಾಜು ಪಾಟೀಲ, ಯೋಜನಾಧಿಕಾರಿ ಶ್ರೀ ನಿಂಗಪ್ಪ ಗುಡಸಲಮನಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿಗಳು, ವಲಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀದೇವಿ ಎಸ್.ವೈ. ಸ್ವಾಗತಿಸಿದರು. ಬನಹಟ್ಟಿ ವಲಯದ ಮೇಲ್ವಿಚಾರಕ ಶಿವಾನಂದ ಎಂ.ವೈ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಲಾಂ ಎಕ್ಸ ಪ್ರೈಸ್ ನ್ಯೂಸ್ ರಬಕವಿ ಬನಹಟ್ಟಿ

