ಬಾಗಲಕೋಟ್ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಉಪಾಧ್ಯಕ್ಷರಾಗಿ ಶಂಕರ್ ಕೆಸರಗೋಪ್ ನೇಮಕ
ಬಾಗಲಕೋಟ್, ಜು. ೧೧: ಬಾಗಲಕೋಟ್ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಉಪಾಧ್ಯಕ್ಷರಾಗಿ ಶಂಕರ್ ಕೆಸರಗೋಪ್ ಅವರನ್ನು ನೇಮಕ ಮಾಡಲಾಗಿದೆ.
ಈ ಸಂರ್ಭದಲ್ಲಿ ಮಾತನಾಡಿದ ಶಂಕರ್ ಕೆಸರಗೋಪ್, ತಮ್ಮ ಮೇಲೆ ವಿಶ್ವಾಸವಿಟ್ಟು ಮಹತ್ವದ ಜವಾಬ್ದಾರಿ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗಿರೀಶ ಅಣ್ಣಾ ಅಂಕಲಗಿ, ಹಿರಿಯ ಮುಖಂಡ ಸಿದ್ದು ಅಣ್ಣಾ ಕೊಣ್ಣೂರ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕರ್ಯರ್ತರು ಹಾಗೂ ತಮ್ಮ ಹಿತೈಷಿಗಳಿಗೆ ಹೃತ್ಪರ್ವಕ ಧನ್ಯವಾದಗಳನ್ನು ರ್ಪಿಸಿದರು.
ಪಕ್ಷವು ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ನರ್ವಹಿಸುವುದಾಗಿ ಅವರು ತಿಳಿಸಿದರು. ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಕಾಂಗ್ರೆಸ್ ಕಿಸಾನ್ ಘಟಕವನ್ನು ಜಿಲ್ಲಾ ಮಟ್ಟದಲ್ಲಿ ಇನ್ನಷ್ಟು ಬಲಪಡಿಸುವ ಜೊತೆಗೆ ಪಕ್ಷದ ಸಂಘಟನೆ ವಿಸ್ತರಣೆಗೆ ಶ್ರಮಿಸುವುದಾಗಿ ಹೇಳಿದರು.
ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವುದು, ರೈತರ ಪರವಾಗಿ ನಿರಂತರವಾಗಿ ಕೆಲಸ ಮಾಡುವುದು ಹಾಗೂ ಹಿರಿಯ ನಾಯಕರ ಮರ್ಗರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ತಮ್ಮ ಸಂಪರ್ಣ ಸಹಕಾರ ನೀಡುವುದಾಗಿ ಶಂಕರ್ ಕೆಸರಗೋಪ್ ಹೇಳಿದರು.
ಈ ಗೌರವಯುತ ಜವಾಬ್ದಾರಿಯನ್ನು ನೀಡಿದ ಪಕ್ಷದ ರಾಜ್ಯ ಹಾಗೂ ಜಿಲ್ಲಾ ನಾಯಕರು, ಕಾಂಗ್ರೆಸ್ ಕುಟುಂಬದ ಎಲ್ಲ ಸದಸ್ಯರು, ಸ್ನೇಹಿತರು, ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

