ಬೆಳಗಾವಿ : ಮಲೆನಾಡಿನ ಹಲವು ಭಾಗಗಳಲ್ಲಿ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಮುಂದುವರಿಯದಿದ್ದು ಕೊಡಗಿನಲ್ಲಿ ಚಳಿ ಹಾಗೂ ತೇವಯುಕ್ತ ವಾತಾವರಣ ಮುಂದುವರಿದಿದೆ ಆದರೆ ಕರಾವಳಿ ಜಿಲ್ಲೆಯ ವಾಗಿ ಕಡಿಮೆಯಾಗಿದೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಬೆಳಿಗ್ಗೆ ಎಂಟು ಗಂಟೆ ವರೆಗೆ 250.7 ಮಿಲಿ ಮೀಟರ್ ಮಳೆ ದಾಖಲಾಗಿದೆ ಚಿಕ್ಕಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ತುಂಗಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ
ಮಹಾರಾಷ್ಟ್ರದ ಕೊಯ್ನಾ ಮಹಾಬಲೇಶ್ವರ ಕೊಂಕಣ ಹಾಗೂ ಸಹ್ಯಾದ್ರಿ ಬೆಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕು ಐದು ದಿನಗಳಿಂದ ಸುರಿಯುತ್ತಿರುವ ಭಾರಿ ಧಾರಾಕಾರ ಮಳೆ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಕೃಷ್ಣ ಮತ್ತು ದೂದ ಗಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ .
ಉಗಾರ್ ಕುಡಚಿ ಸಂಪರ್ಕ ಸೇತುವೆಯ ಮೇಲೆ ಸುಮಾರು ಮೂರು ಅಡಿ ನೀರು ಹರಿಯುತ್ತಿರುವುದರಿಂದ ಬುಧವಾರ ತಡ ರಾತ್ರಿಯಂದಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅದೇ ರೀತಿ ಸದಲ್ಗಾ ಬೋರ್ಗಾವ್ ಮತ್ತು ಎಕ್ಸ್ ಎಂಬ ಧಾನವಾಡ ಸೇತುವೆಗಳು ಮುಳುಗಡೆಯ ಹಂತ ತಲುಪಿದ್ದು ವೇದಗಂಗಾ ದೂದಗಂಗಾ ಮತ್ತು ಕೃಷ್ಣ ನದಿಗಳ ಜಲಾವೃತಗೊಂಡಿದೆ. ಪೊಲೀಸರು ಎರಡು ಬದಿಯಲ್ಲಿ ಬ್ಯಾರಿಕೆಗಳನ್ನು ಹಾಕಿ ಸಂಚಾರ ನಿರ್ಬಂಧಿಸಿದ್ದಾರೆ.

