ರಬಕವಿ-ಬನಹಟ್ಟಿ: ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭಕ್ಕೆ ಆಗ್ರಹ
ರಬಕವಿ-ಬನಹಟ್ಟಿ ತಾಲೂಕಿನ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಪರ್ಣಗೊಂಡು ಸುಮಾರು ಎರಡು ರ್ಷಗಳಾದರೂ ಇದುವರೆಗೆ ಸರ್ವಜನಿಕ ಸೇವೆಗೆ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ಕ್ಯಾಂಟೀನ್ ಅನ್ನು ಶೀಘ್ರ ಆರಂಭಿಸಬೇಕೆಂದು ಸಾಮಾಜಿಕ ಸೇವಕ ವಿನೋದ್ ಮನವಿ ಮಾಡಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು, ನಗರಸಭೆ ಆಯುಕ್ತರು, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮ ಕೈಗೊಂಡು ಇಂದಿರಾ ಕ್ಯಾಂಟೀನ್ ಅನ್ನು ಸರ್ವಜನಿಕರ ಬಳಕೆಗೆ ತೆರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಡವರು, ಕರ್ಮಿಕರು, ವಿದ್ಯರ್ಥಿಗಳು ಹಾಗೂ ಸರ್ವಜನಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ ನರ್ಮಿಸಲಾದ ಈ ಕ್ಯಾಂಟೀನ್ ಶೀಘ್ರ ಆರಂಭವಾದರೆ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಕಟ್ಟಡ ನರ್ಮಾಣ ಪರ್ಣಗೊಂಡಿದ್ದರೂ ಸೇವೆ ಆರಂಭವಾಗದಿರುವುದು ಸರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಮಾಡದೆ ಅಗತ್ಯ ಕ್ರಮ ಕೈಗೊಂಡು ಇಂದಿರಾ ಕ್ಯಾಂಟೀನ್ ಅನ್ನು ಆದಷ್ಟು ಬೇಗ ಆರಂಭಿಸಬೇಕೆಂದು ಸಾಮಾಜಿಕ ಸೇವಕ ವಿನೋದ್ ಮನವಿ ಮಾಡಿದ್ದಾರೆ

