ರಬಕವಿ – ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಹೊಸ ಬಸ್ ನಿಲ್ದಾಣ ಹತ್ತಿರವಿರುವ ಹಜಾರೆ ಬಜಾರ ಆವರಣದಲ್ಲಿ ಶ್ರೀಶೈಲಂ ಕೆಫೆಯನ್ನು ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾ ಸ್ವಾಮೀಜಿಯವರು ಹಾಗೂ ಜಮಖಂಡಿಯ ಶ್ರೀ ಸಿದ್ಧಮುತ್ಯಾ ಪೂಜ್ಯರು ಹಾಗೂ ಹಳಿಂಗಳಿಯ ಶ್ರೀ ಮಹಾವೀರ ಅಲ್ಲಮಪ್ರಭು ಮಹಾಸ್ವಾಮಿಗಳು, ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮುತ್ತಿನ ಕಂತಿ ಹಿರೇಮಠ ಜಮಖಂಡಿ ಹಾಗೂ ಖ್ಯಾತ ಉದ್ಯಮಿಗಳಾದ ಸತೀಶ ಹಜಾರೆ ಹಾಗೂ ಜನಪ್ರಿಯ ಶಾಸಕರಾದ ಸಿದ್ದು ಸವದಿ ಅವರು ಉದ್ಘಾಟಿಸಿದರು 
ಶ್ರೀಶೈಲಂ ಕೆಫಿಯನ್ನು ಉದ್ಘಾಟಿಸಿ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾ ಸ್ವಾಮೀಜಿ ಮಾತನಾಡಿ , ಅವರು ಒಂದು ಹೋಟೆಲ್ ಎಂದರೆ ಕೇವಲ ವ್ಯಾಪಾರದ ಸ್ಥಳವಲ್ಲ; ಅದು ಜನರಿಗೆ ಉತ್ತಮ ಗುಣಮಟ್ಟದ ಆಹಾರ, ಆತಿಥ್ಯ ಮತ್ತು ಸೇವೆಯನ್ನು ನೀಡುವ ಕೇಂದ್ರವಾಗಿದೆ. ಈ ಹೊಸ ಹೋಟೆಲ್ ನಮ್ಮ ಊರಿನ ಅಭಿವೃದ್ಧಿಗೆ ಸಹಕಾರಿಯಾಗುವುದರ ಜೊತೆಗೆ ಅನೇಕ ಜನರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸುತ್ತದೆ.
ಈ ಹೋಟೆಲ್ ಆರಂಭಿಸಿರುವ ಮಾಲೀಕರಾದ ಅಕ್ಷಯ ಬಾಂಗಿ, ಚಿನ್ಮಯ ಬಾಂಗಿ, ಬಸವರಾಜ ಬಾಂಗಿ ಅವರ ದೃಢ ಸಂಕಲ್ಪವನ್ನು ನಾವು ಅಭಿನಂದಿಸೋಣ. ಇವರ ಸೇವೆ ಸದಾ ಗ್ರಾಹಕರ ವಿಶ್ವಾಸವನ್ನು ಗಳಿಸಲಿ ಹಾಗೂ ಈ ಕೆಫೆ ದಿನದಿಂದ ದಿನಕ್ಕೆ ಹೆಚ್ಚಿನ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಹೋಟೇಲ್ ಮಾಲೀಕರಾದ ಜಮಖಂಡಿಯ ಚಿನ್ಮಯ ಬಾಂಗಿ ಅವರು ಗ್ರಾಹಕರಿಗೆ ರುಚಿಕರ, ಆರೋಗ್ಯಕರ ಹಾಗೂ ಕೈಗೆಟುಕುವ ದರದಲ್ಲಿ ಆಹಾರ ಒದಗಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು. ಕುಟುಂಬ ಸಮೇತ ಭೇಟಿ ನೀಡುವವರಿಗೆ ಉತ್ತಮ ವಾತಾವರಣ ಹಾಗೂ ಗುಣಮಟ್ಟದ ಸೇವೆ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಡಿ ಕೆ ಕೊಟ್ರಶೆಟ್ಟಿ ಫೌಂಡೇಶನ್ ಅಧ್ಯಕ್ಷರಾದ ಸೋಮಶೇಖರ ಕೊಟ್ರಶೆಟ್ಟಿ. ಬಸವರಾಜ ದಲಾಲ, ಗಣಪತಿ ಹಜಾರೆ, ನೀಲಕಂಠ ಮುತ್ತೂರ, ಸಂಜಯ ತೆಗ್ಗಿ, ಪ್ರಭು ಉಮದಿ, ವಿಜಯಕುಮಾರ ಹಲಕುರ್ಕಿ, ಮಲ್ಲಿಕಾರ್ಜುನ ಗಡೆನ್ನವರ, ಸಿ ಎಸ್ ಬಾಂಗಿ, ಶ್ರೀ ಬಾಪುರಿ, ಮಹದೇವ ಕೋಟ್ಯಾಳ, ಮಲ್ಲು ಬದ್ರಣ್ಣವರ, ಶಿವಾನಂದ ದಾಶಾಳ, ಬಸವರಾಜ ಹನಗಂಡಿ, ಗಿರೀಶ ಮುತ್ತುರ.ಸೇರಿದಂತ ಮುಂತಾದವರು ಪಾಲ್ಗೊಂಡಿದ್ದರು.
ವರದಿಗಾರರು : ಪ್ರಕಾಶ ಕುಂಬಾರ

